Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಆರ್ಯನ್` ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ
Posted date: 17 Thu, Oct 2013 – 03:53:30 PM

ಡಿ.ಕೇಶವ್ ಫ಼ಿಲಂಸ್ ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿರುವ ‘ಅರ್ಯನ್ ಚಿತ್ರಕ್ಕೆ ಇದೇ ತಿಂಗಳ ಹದಿನಾರರಿಂದ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ.
    ಖ್ಯಾತ ನಿರ್ದೆಶಕ ಡಿ.ರಾಜೇಂದ್ರಬಾಬು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಹ್ಯಾಟ್ರಿಕ್‌ಹೀರೋ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ರಮ್ಯ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಶರತ್‌ಬಾಬು, ಬುಲೆಟ್‌ಪ್ರಕಾಶ್, ವಿನಯಾಪ್ರಸಾದ್, ಅರ್ಚನಾಗುಪ್ತ ಮುಂತಾದವರಿದ್ದಾರೆ.
    ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನದ ‘ಅರ್ಯನ್ ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಆರ್ಯನ್` ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.